Holding UNECOSOC Special Consultative Status

Logo

Holding UNECOSOC Special Consultative Status

ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ನಿವಾರಣೆಗೆ ಒಪ್ಪಂದ

ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ನಿವಾರಣೆಗೆ ಒಪ್ಪಂದ

event person Chd Group

ಉಡುಪಿ, ಎ.1: ಜಿಲ್ಲೆಯಾದ್ಯಂತ ಮಕ್ಕಳಲ್ಲಿರುವ ಪೌಷ್ಟಿಕಾಂಶದ ಕೊರತೆಯನ್ನು ನಿವಾರಿಸುವ ಸಲುವಾಗಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮತ್ತು ಸಾಧಾರಣ ಅಪೌಷ್ಟಿಕತೆ ಇರುವ ಮಕ್ಕಳ ಪ್ರಮಾಣ ವನ್ನು ತಗ್ಗಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಉಡುಪಿ ಮತ್ತು ಮಂಗಳೂರಿನ ಸಿ.ಎಚ್.ಡಿ. ಗ್ರೂಪ್ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಈ ಒಡಂಬಡಿಕೆಗೆ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಡಾ.ನಾಗಭೂಷಣ ಉಡುಪ ಮತ್ತು ಸಿಎಚ್‌ ಡಿ ಗ್ರೂಪ್‌ನ ಸ್ಥಾಪಕ ಸಿಇಒ ಡಾ.ಎಡ್ಕಂಡ್ ಫೆರ್ನಾಂಡಿಸ್ ಸಹಿ
ಮಾಡಿದರು.
ಈ ಸಂದರ್ಭ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜ್ಯೋತ್ಸಾ ಬಿ.ಕೆ., ಜಿಲ್ಲಾ ಮಲೇರಿಯಾ ನಿಯಂತ್ರಣಾ ಧಿಕಾರಿ ಡಾ. ಪ್ರಶಾಂತ್ ಜಿ. ಭಟ್,
ಜಿಲ್ಲೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು. ಸಮುದಾಯದಲ್ಲಿ ಜಾಗೃತಿ ಮೂಡಿಸಿ ಅಪೌಷ್ಠಿಕತೆಯನ್ನು ದೂರ ಮಾಡುವ ಪ್ರಕ್ರಿಯೆ ಎಪ್ರಿಲ್ 1ರಿಂದ ಪ್ರಾರಂಭಗೊಂಡಿದೆ ಎಂದು ಇಲಾಖೆಯ ಪ್ರಕಟನೆ ತಿಳಿಸಿದೆ